kn.wikipedia.org

ಐಸ್‍ಲ್ಯಾಂಡ್ - ವಿಕಿಪೀಡಿಯ

  • ️Mon May 18 2020

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಸ್‍ಲ್ಯಾಂಡ್ ಗಣರಾಜ್ಯ

Lýðveldið Ísland
ಲ್ಯಿದ್ವೆಲ್ಡಿದ್ ಇಸ್ಲ್ಯಾಂಡ್

Flag of Iceland

Flag

Anthem: Lofsöngur
Location of ಐಸ್‍ಲ್ಯಾಂಡ್ (orange) in Europe (white)

Location of ಐಸ್‍ಲ್ಯಾಂಡ್ (orange)

in Europe (white)

Capitalರೆಕ್ಜವಿಕ್
Largest cityರಾಜಧಾನಿ
Official languagesಐಸ್‍ಲ್ಯಾಂಡಿಕ್ ಭಾಷೆ
Demonym(s)Icelander
Governmentಸಾಂವಿಧಾನಿಕ ಗಣರಾಜ್ಯ

• ರಾಷ್ಟ್ರಪತಿ

ಓಲಫುರ್ ರಾಗ್ನಾರ್ ಗ್ರಿಮ್ಸನ್

• ಪ್ರಧಾನ ಮಂತ್ರಿ

ಗೀರ್ ಎಚ್. ಹಾರ್ದೆ
ಸ್ವಾತಂತ್ರ್ಯ 

• ಸ್ವಆಳ್ವಿಕೆ

ಫೆಬ್ರುವರಿ ೧ ೧೯೦೪
ಡಿಸೆಂಬರ್ ೧ ೧೯೧೮
ಜೂನ್ ೧೭ ೧೯೪೪

• Water (%)

೨.೭
Population

• ಜುಲೈ ೨೦೦೭ estimate

311,3961 (೧೭೨ನೇ)

• ಡಿಸೆಂಬರ್ ೧೯೮೦ census

229,187
GDP (PPP)೨೦೦೬ estimate

• Total

$12.172 ಬಿಲಿಯನ್ (೧೩೨ನೇ)

• Per capita

40,277 (2005) (೫ನೇ)
GDP (nominal)೨೦೦೬ estimate

• Total

$16.579 ಬಿಲಿಯನ್ (೯೩ನೇ)

• Per capita

$54,858 (೪ನೇ)
HDI (೨೦೦೪)Increase 0.960
Error: Invalid HDI value · ೨ನೇ
Currencyಐಸ್‍ಲ್ಯಾಂಡ್‍ನ ಕ್ರೋನ (ISK)
Time zoneUTC+0 (GMT)

• Summer (DST)

not observed
Calling code354
ISO 3166 codeIS
Internet TLD.is
  1. "Statistics Iceland". www.statice.is. 1 December 2006. ; ;

ಐಸ್‍ಲ್ಯಾಂಡ್, ಅಧಿಕೃತವಾಗಿ ಐಸ್‍ಲ್ಯಾಂಡ್ ಗಣರಾಜ್ಯ ([Ísland or Lýðveldið Ísland] Error: {{Lang}}: text has italic markup (help)) ಉತ್ತರ ಯುರೋಪ್ನ ಒಂದು ದ್ವೀಪರಾಷ್ಟ್ರ. ಯುರೋಪ್ನ ಖಂಡ ಭಾಗ ಮತ್ತು ಗ್ರೀನ್‍ಲ್ಯಾಂಡ್ಗಳ ಮಧ್ಯೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ಇದು ಸ್ಥಿತವಾಗಿದೆ.[] ಇದರ ರಾಜಧಾನಿ ಮತ್ತು ಅತಿ ದೊಡ್ಡ ನಗರ ರೆಕ್ಜವಿಕ್.

ಈ ದ್ವೀಪ ಸಮೂಹ ಒಟ್ಟು 1,03,000 ಚ.ಕಿಮೀ ವಿಸ್ತೀರ್ಣವಾಗಿದ್ದು ಉ.ಅ. 63024ದಿ-66032ದಿ ಹಾಗೂ ಪ.ರೇ. 13030ದಿ-24030ದಿ ಗಳ ನಡುವೆ ಹಬ್ಬಿದೆ. ಮೇಲ್ಮೈ ಲಕ್ಷಣ: ಶೀತವಲಯದ ದ್ವೀಪವಾಗಿದ್ದು, ಅಗ್ನಿ ಪರ್ವತದಿಂದ ಹೊರಟ ಲಾವಾ ಊಟೆಗಳಿಂದ ನಿರ್ಮಾಣವಾಗಿದ್ದು ಹಿಮದಿಂದಾವೃತವಾಗಿದೆ. ತೀರಪ್ರದೇಶಗಳು ಮಾತ್ರ ವಾಸಿಸಲು ಯೋಗ್ಯವಾಗಿವೆ. ಐಸ್ಲೆಂಡ್ ತುಂಬಾ ಕುತೂಹಲಕಾರಿಯಾದ ನಾಡು. ಇಲ್ಲಿನ ಬಂಡೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದರಿಂದ ನೀರನ್ನು ಅವು ಉಳಿಸಿಕೊಳ್ಳಲಾರವು. ಹೀಗಾಗಿ ಬಂಡೆಗಳ ವಿಸ್ತಾರ ಪ್ರದೇಶದಲ್ಲಿ ಏನೂ ಬೆಳೆಯದು. 200 ಕ್ಕೂ ಹೆಚ್ಚು ಅಗ್ನಿ ಪರ್ವತಗಳಿವೆ. ಟೖನಡೀಲಾ (1695 ಮೀ), ಸ್ನೂಕಾಸ್ (2119 ಮೀ) ಎತ್ತರದ ಅಗ್ನಿ ಪರ್ವತಗಳಾಗಿವೆ. ಐಸ್ಲೆಂಡ್ನಲ್ಲಿ ಬಿಸಿನೀರಿನ ಊಟೆಗಳು, ಖನಿಜ ಚಿಲುಮೆಗಳು, ಬಗೆ ಬಗೆಯ ಪರ್ವತಗಳು ಕಂಡು ಬರುತ್ತವೆ. ತೇಜೋರ್ಸಿ, ಜೋಲೆ, ಉಂಡಾ, ಪ್ಲಿಜೊಯಿಟ್ ಮುಂತಾದವು ಇಲ್ಲಿನ ಪ್ರಮುಖ ನದಿಗಳು.

ಇದು ಶೀತವಲಯದ ವಾಯುಗುಣ ಹೊಂದಿದೆ. ಆದರೆ ತೀರಪ್ರದೇಶದ ಹಿತಕರವಾಗಿದ್ದು ಬೇಸಗೆಯಲ್ಲಿ ಗಲ್ಫ್‌ ಸ್ಟ್ರೀಮ್ ಉಷ್ಣೋದಕ ಪ್ರವಾಹ ವಿರುವುದರಿಂದ ಬೆಚ್ಚಗಿರುತ್ತದೆ. ಆದ್ದರಿಂದ ತೀರ ಪ್ರದೇಶದಲ್ಲಿ ವಾರ್ಷಿಕ ಉಷ್ಣಾಂಶ 10º ಸೆ, ಚಳಿಗಾಲದಲ್ಲಿ 1ºಸೆ ಕಂಡುಬರುತ್ತದೆ. ಆದರೆ ಒಳ ಪ್ರದೇಶಗಳಲ್ಲಿ -100ಸೆ ಗಿಂತ ಕಡಿಮೆ ಉಷ್ಣಾಂಶವಿದ್ದು ಹಿಮಭರಿತವಾಗಿವೆ.

Reykjavík, Iceland (1961–1990)ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 1.9
(35.4)
2.8
(37)
3.2
(37.8)
5.7
(42.3)
9.4
(48.9)
11.7
(53.1)
13.3
(55.9)
13.0
(55.4)
10.1
(50.2)
6.8
(44.2)
3.4
(38.1)
2.2
(36)
7.0
(44.6)
ಕಡಮೆ ಸರಾಸರಿ °C (°F) −3.0
(26.6)
−2.1
(28.2)
−2.0
(28.4)
0.4
(32.7)
3.6
(38.5)
6.7
(44.1)
8.3
(46.9)
7.9
(46.2)
5.0
(41)
2.2
(36)
−1.3
(29.7)
−2.8
(27)
1.9
(35.4)
Source #1: Icelandic Meteorological Office[]
Source #2: All Icelandic weather station climatic monthly means[]
Akureyri, Iceland (1961–1990)ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 0.9
(33.6)
1.7
(35.1)
2.1
(35.8)
5.4
(41.7)
9.5
(49.1)
13.2
(55.8)
14.5
(58.1)
13.9
(57)
9.9
(49.8)
5.9
(42.6)
2.6
(36.7)
1.3
(34.3)
6.7
(44.1)
ಕಡಮೆ ಸರಾಸರಿ °C (°F) −5.5
(22.1)
−4.7
(23.5)
−4.2
(24.4)
−1.5
(29.3)
2.3
(36.1)
6.0
(42.8)
7.5
(45.5)
7.1
(44.8)
3.5
(38.3)
0.4
(32.7)
−3.5
(25.7)
−5.1
(22.8)
0.2
(32.4)
Source #1: Icelandic Meteorological Office[]
Source #2: All Icelandic weather station climatic monthly means[]

ತೀರಪ್ರದೇಶದಲ್ಲಿ ಬೇಸಗೆಯಲ್ಲಿ ಮಾತ್ರ ಲಿಲ್ಲೀ, ಪಾಚಿ, ಶಿಲಾವಲ್ಕ, ಟಚ್-ಮಿ-ನಾಟ್ ಸಸ್ಯಗಳ ಜೊತೆಗೆ ಕೆಲವು ಸಣ್ಣಪುಟ್ಟ ಪೊದೆಜಾತಿಗೆ ಸೇರಿದ ಸಸ್ಯವರ್ಗ, ಸ್ವಲ್ಪ ಹುಲ್ಲುಗಾವಲು ಕಂಡುಬರುತ್ತವೆ. ತೀರಪ್ರದೇಶದಲ್ಲಿ ಕೆಲವು ಕಡೆ ಓಕ್, ನೀಪಲ್, ಪೈನ್ ಮರಗಳು ಕಂಡುಬರುತ್ತವೆ.

The Arctic fox is the only indigenous land mammal in Iceland and was the only land mammal before the arrival of humans.

ಸದಾ ಹಿಮ ಬೀಳುವುದರಿಂದ ಹಿಮನದಿ, ಹಿಮಸಾರಂಗ, ಹಿಮಕರಡಿ, ಹಿಮನಾಯಿ, ಹಿಮತೋಳ, ಕಸ್ತೂರಿ ಮೃಗ ಹೆಚ್ಚಾಗಿ ಕಂಡುಬರುತ್ತವೆ.

19ನೆಯ ಶತಮಾನದವರೆಗೆ ಯಾವುದೇ ಚಕ್ರದ ಬಂಡಿಗಳಿರುವ ವಾಹನಗಳ ಪರಿಚಯವಿರಲಿಲ್ಲ. ಆದರೆ ಇಂದು ಅಮೆರಿಕನ್, ಕೆನಡಿಯನ್, ಯುರೋಪಿಯನ್ನರಿಂದಾಗಿ ವ್ಯವಸಾಯ ಸ್ವಲ್ಪ ಅಭಿವೃದ್ಧಿ ಹೊಂದಿದೆ. ತೀರಪ್ರದೇಶಗಳು ಆಲೂಗೆಡ್ಡೆ, ಈರುಳ್ಳಿ, ಹೂವುಗಳು, ತರಕಾರಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ. ಇಲ್ಲಿನ ಮಣ್ಣು ಫಲವತ್ತಾಗಿಲ್ಲದಿರುವುದರಿಂದ ವ್ಯವಸಾಯ ಕಷ್ಟ.

ತೀರ ಪ್ರದೇಶಗಳಲ್ಲಿ, ಹುಲ್ಲುಗಾವಲುಗಳಲ್ಲಿ ಕುರಿ, ದನ, ಹಂದಿ, ಹಿಮಸಾರಂಗ, ಕುದುರೆಗಳನ್ನು ಸಾಕುತ್ತಾರೆ. ಒಳ ಪ್ರದೇಶಗಳಲ್ಲಿ ಹಿಮ ಸಾರಂಗವನ್ನು ಆಹಾರ, ವಸತಿಗಾಗಿ, ತೈಲಕ್ಕಾಗಿ, ಉಡುಪುಗಳಿಗಾಗಿಯೂ ಸಾಕುತ್ತಾರೆ.

ಇದು ಪ್ರಮುಖ ಉದ್ಯೋಗವಾಗಿದೆ. ಅಟ್ಲಾಂಟಿಕ್, ಆಕಿರ್ಟ್‌ಕ್ ತೀರದಲ್ಲಿ ಮೀನುಗಾರಿಕೆ ಹೆಚ್ಚಾಗಿ ಅಭಿವೃದ್ಧಿ ಹೊಂದಿದ್ದು, ರಾಷ್ಟ್ರೀಯ ಆದಾಯಕ್ಕೆ ಮೂಲವಾಗಿದೆ. ಮೀನು ಜನರ ಪ್ರಮುಖ ಆಹಾರವಾಗಿದೆ.

ಮೀನು ಸಂಸ್ಕರಣೆ ಇಲ್ಲಿನ ಮುಖ್ಯಕೈಗಾರಿಕೆಯಾಗಿದೆ. ತೀರ ಪ್ರದೇಶಗಳಲ್ಲಿ ಆಹಾರ ಸಂಸ್ಕರಣೆ, ಸಿಮೆಂಟ್, ಗೊಬ್ಬರ, ಬಟ್ಟೆ ಕೈಗಾರಿಕೆಗಳು ಸ್ವಲ್ಪ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿವೆ. ಮುಖ್ಯವಾಗಿ ಮೀನುಗಳನ್ನು ಡಬ್ಬಗಳಲ್ಲಿ ಹಾಗೂ ಶೈತ್ಯಾಗಾರಗಳಲ್ಲಿ ರಕ್ಷಿಸುವುದು ಮುಖ್ಯ ಕೈಗಾರಿಕೆಯಾಗಿದೆ.

ಐಸ್ಲೆಂಡ್ ಜನ ವಿದ್ಯಾವಂತರು. 19ನೆಯ ಶತಮಾನದವರೆಗೆ ಅಲ್ಲಿನ ಜನ ಅಧುನಿಕ ಸೌಲಭ್ಯ, ಸಂಪರ್ಕದಿಂದ ದೂರವಾಗಿದ್ದರು. ಈಗ ಐಸ್ಲೆಂಡ್ ಆಧುನಿಕ ದೇಶವಾಗಿದೆ. ಇವರ ಭಾಷೆ ಐಸ್ಲ್ಯಾಂಡಿಕ್. ಜನ ಪ್ರಾಟಸ್ಟೆಂಟ್ ಕ್ರಿಶ್ಚಿಯನ್ ಧರ್ಮಾವಲಂಬಿಗಳಾಗಿದ್ದಾರೆ. ಇಲ್ಲಿ ಬುಡಕಟ್ಟು ಜನಾಂಗದವರಾದ ಎಸ್ಕಿಮೋಗಳು ಇಂದು ಮಾರ್ಪಾಟನ್ನೂ ಹೊಂದಿದ್ದಾರೆ. 9ನೆಯ ಶತಮಾನದಲ್ಲಿ ನಾರ್ವೆ, ಬ್ರಿಟನ್ಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆಸಿದರು. 1242 ರಲ್ಲಿ ನಾರ್ವೆ ಅರಸರ ಅಧೀನದಲ್ಲಿದ್ದು ಅನಂತರ ಡೆನ್ಮಾರ್ಕಿನ ವಶವಾಯಿತು. 1944 ರಲ್ಲಿ ಐಸ್ಲೆಂಡ್ ಸ್ವತಂತ್ರವಾಯಿತು. ಮೊಟ್ಟ ಮೊದಲ ಬಾರಿಗೆ ವೆಂಗ್ವೆಲ್ಲಡ್ನಲ್ಲಿ ಸ್ವಾತಂತ್ರ್ಯ ಘೋಷಣೆಯ ಸಮಾರಂಭ ನಡೆಯಿತು.

೩,೭೬,೨೪೮(೨೦೨೨). ಪ್ರತಿ ಚ.ಕಿಮೀ ಗೆ ೩.೬೬ ರಷ್ಟು ಜನರಿದ್ದಾರೆ. ರಾಷ್ಟ್ರಾಧ್ಯಕ್ಷರನ್ನು 4 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. 35 ವರ್ಷದ ಮೇಲ್ಪಟ್ಟವರು ಅಧ್ಯಕ್ಷರನ್ನು ಆರಿಸಲು ಯೋಗ್ಯವಾಗಿರುತ್ತಾರೆ. ದೇಶವನ್ನು ರಾಜ್ಯ, ಜಿಲ್ಲೆ ಮತ್ತು ಕಾರ್ಪೊರೇಷನ್ಗಳಾಗಿ ವಿಂಗಡಿಸಲಾಗಿದೆ. 8 ನಗರ ಕಾರ್ಪೊರೇಷನ್ಗಳಿವೆ. ಈ ದೇಶದ ರಾಜಧಾನಿ ರಿಕ್ಯವಿಕ್. ಜನಸಂಖ್ಯೆ 1,03,036 (2002). ನಾಣ್ಯ ಕ್ರೊನಾ.

ಮೀನು ಮತ್ತು ಸಾಗರ ಉತ್ಪನ್ನ ವಸ್ತುಗಳು ಪ್ರಮುಖ ರಫ್ತು ಸರಂಜಾಮು. ಅಲ್ಲದೆ ಹೂವುಗಳು, ಸಂಸ್ಕರಣ ವಸ್ತುಗಳನ್ನೂ ರಫ್ತುಮಾಡಲಾಗುತ್ತದೆ. ಆಹಾರ ಪದಾರ್ಥ, ಯಂತ್ರ, ಯಂತ್ರೋಪಕರಣ, ರಾಸಾಯನಿಕ ವಸ್ತುಗಳು, ಪ್ರಾಣಿಗಳ ಕೊಬ್ಬು, ಪ್ರಾಣಿಗಳ ಆಹಾರ ಮುಂತಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಆಸ್ಟ್ರೇಲಿಯ, ಡೆನ್ಮಾರ್ಕ್, ಬೆಲ್ಜಿಯಂ, ಫಿನ್ಲೆಂಡ್, ಚೀನ, ಫ್ರಾನ್ಸ್‌, ಜರ್ಮನಿ, ನಾರ್ವೆ, ಸ್ವೀಡನ್ ಮುಂತಾದ ಪ್ರದೇಶಗಳೊಡನೆ ವ್ಯಾಪಾರ ನಡೆಸುತ್ತಿದೆ. (ಎಸ್.ಕೆ.)

Norsemen landing in Iceland – a 19th-century depiction by Oscar Wergeland

ಯುರೋಪಿನ ನಾವಿಕರನೇಕರಿಗೆ ಪ್ರ.ಶ. 4ನೆಯ ಶತಮಾನದಷ್ಟು ಹಿಂದೆಯೇ ಐಸ್ಲೆಂಡಿನ ವಿಚಾರ ಗೊತ್ತಿತ್ತು. ಆದರೆ 9ನೆಯ ಶತಮಾನಕ್ಕೆ ಮುಂಚೆ ಯಾರೂ ಇಲ್ಲಿ ನೆಲೆಸಿದಂತಿಲ್ಲ. ಐರ್ಲೆಂಡಿನ ವಲಸೆಗಾರರು 9ನೆಯ ಶತಮಾನದಲ್ಲಿ ಅಲ್ಲಲ್ಲಿ ವಾಸಿಸುತ್ತಿದ್ದರು. ಆದರೆ ಇವರ ಬಗ್ಗೆ ವಿವರಗಳು ಗೊತ್ತಿಲ್ಲ. ಇತರರು ಅಲ್ಲಿಗೆ ಬಂದಾಗ ಇವರು ಅಲ್ಲಿಂದ ಹೊರಟು ಹೋದರೆಂದು ಹೇಳಲಾಗಿದೆ. ಪ್ರ.ಶ. 870ರಲ್ಲಿ ಇಂಗೋಲ್ಫ್‌ ಅನಾರ್ಸನ್ ಎಂಬ ವೈಕಿಂಗ್ ಪ್ರಥಮ ವಸಾಹತನ್ನು ಸ್ಥಾಪಿಸಿದ. ಅನಂತರ 60 ವರ್ಷಗಳಲ್ಲಿ ಇನ್ನೂ ಅನೇಕ ವಸಾಹತುಗಳು ಬೆಳೆದುವು. ಪ್ರಾರಂಭದಲ್ಲಿ ಪ್ರತಿ ವಸಾಹತಿನ ಸರ್ಕಾರವನ್ನು ಅಲ್ಲಿಯ ದೇವಾಲಯದ ಮೇಲ್ವಿಚಾರಕ ನಡೆಸುತ್ತಿದ್ದ. ಅನಂತರ ಎಲ್ಲ ವಸಾಹತುಗಳಿಗೂ ಒಂದೇ ಸರ್ಕಾರ ಏರ್ಪಟ್ಟು ಶ್ರೀಮಂತರ ಆಡಳಿತ ಪ್ರಾರಂಭವಾಯಿತು. 981ರಲ್ಲಿ ಕಾಲಿಟ್ಟ ಕ್ರೈಸ್ತಧರ್ಮ ಪ್ರ.ಶ. 1000ದ ವೇಳೆಗೆ ಶಾಸನಸಮ್ಮತ ಧರ್ಮವಾಗಿ ಶಾಲೆಗಳೂ ಚರ್ಚುಗಳೂ ಸ್ಥಾಪನೆಯಾದುವು. 19ನೆಯ ಶತಮಾನದಲ್ಲಿ ಜಾನ್ ಸಿಗುರ್ಡ್‌ಸನನ ನಾಯಕತ್ವದಲ್ಲಿ ರಾಷ್ಟ್ರೀಯ ಜಾಗೃತಿಯುಂಟಾಗಿ, ಜಾರನ್ ಜಾನ್ಸನ್, ಸ್ಪೇನ್ ಜಾರ್ನ್‌ಸನ್, ಹಾನೆಸ್ ಹಾಫ್ಸ್ಟೀನ್ ಮುಂತಾದವರ ನೇತೃತ್ವದಲ್ಲಿ ದೇಶ ಆರ್ಥಿಕಾಭಿವೃದ್ಧಿ ಸಾಧಿಸಿತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನರು ಇದನ್ನು ಆಕ್ರಮಿಸಿಕೊಂಡಿದ್ದರು. ಅನಂತರ ತಮ್ಮ ದೇಶಗಳ ರಕ್ಷಣಾ ದೃಷ್ಟಿಯಿಂದ ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಬ್ರಿಟನ್ ಇಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಿ ಅಭಿವ್ಧದ್ಧಿ ಕಾರ್ಯಗಳಿಗೆ ಬೆಂಬಲ ಕೊಟ್ಟುವು. 1380ರಿಂದ ಡೆನ್ಮಾರ್ಕಿಗೆ ಸೇರಿದ್ದ ಈ ದೇಶ 1944ರಲ್ಲಿ ಸ್ವತಂತ್ರವಾಯಿತು. ಇದೊಂದು ಗಣರಾಜ್ಯ.

  1. "CIA - The World Fact book -- Iceland". Government. United States Government. July 20, 2006. Archived from the original on 2020-05-18. Retrieved 2007-09-29. ; ;
  2. ೨.೦ ೨.೧ Icelandic Climatic Data Archived 15 July 2013 ವೇಬ್ಯಾಕ್ ಮೆಷಿನ್ ನಲ್ಲಿ. (English introduction), Veðurstofa Íslands (Icelandic Meteorological Office)
  3. ೩.೦ ೩.೧ celandic weather stations Archived 23 March 2022 ವೇಬ್ಯಾಕ್ ಮೆಷಿನ್ ನಲ್ಲಿ. from above site